ನವೋದಯ ಪ್ರವೇಶ ಪರೀಕ್ಷೆ ಮಾಹಿತಿ
ಜವಾಹರ ನವೋದಯ ವಿದ್ಯಾಲಯಗಳು ಭಾರತದ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಉಚಿತ ವಸತಿ ಶಾಲೆಗಳು. ಗ್ರಾಮೀಣ ಪ್ರದೇಶದ ಬುದ್ಡಿವಂತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಊಟ ಮತ್ತು ವಸತಿಯನ್ನು ಒದಗಿಸಿಕೊಡುವ ಈ ಶಾಲೆಗಳು ಭಾರತದ ಉದ್ದಗಲಕ್ಕೂ ಇವೆ.
೧೯೮೫ರಲ್ಲಿ ಅಂದಿನ ಮಾನವ ಸಂಪನ್ಮೂಲಗಳ ಮಂತ್ರಿಯಾಗಿದ್ದ (ಮುಂದೆ ಭಾರತದ ಪ್ರಧಾನಮಂತ್ರಿಯಾದ) ಪಿ.ವಿ. ನರಸಿಂಹರಾವ್ ಅವರ ಕನಸಿನ ಕೂಸಾಗಿ ಶುರುವಾದ ಈ ವಿದ್ಯಾಲಯಗಳ ಮುಖ್ಯ ಗುರಿ ಭಾರತದ ಗ್ರಾಮೀಣ ಭಾಗದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಮಾಡುವುದು. ಶುರುವಾದಾಗ ಬರೀ ನವೋದಯ ವಿದ್ಯಾಲಯಗಳಾಗಿದ್ದ ಈ ಶಾಲೆಗಳು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರುರವರ ಜನ್ಮಶತಾಬ್ದಿಯ ವರ್ಷದಲ್ಲಿ 'ಜವಾಹರ ನವೋದಯ ವಿದ್ಯಾಲಯ'ಗಳೆಂದು ಪುನಃನಾಮಕರಣಗೊಂಡವು. ಈಗ ಹೆಚ್ಚೂಕಡಿಮೆ 557 ನವೋದಯ ವಿದ್ಯಾಲಯಗಳು ತಮಿಳುನಾಡು ರಾಜ್ಯವನ್ನುಳಿದು ಭಾರತದೆಲ್ಲೆಡೆ ಇವೆ. ಈ ವಿದ್ಯಾಲಯಗಳು ಜಿಲ್ಲಾಮಟ್ಟದಲ್ಲಿ ನಡೆಯುವ ರಾಷ್ಟ್ರವ್ಯಾಪಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಊಟ ಮತ್ತು ವಸತಿಯನ್ನೊದಗಿಸಿಕೊಡುತ್ತವೆ.
ಪ್ರವೇಶ ಕಾರ್ಯವಿಧಾನ
ಆಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಭಾರತದಲ್ಲಿನ ಪ್ರತೀ ಜಿಲ್ಲೆಯಲ್ಲಿನ ೫ನೆ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಜವಾಹರ್ ನವೋದಯ ವಿದ್ಯಾಲಯಗಳಿಗೆ ಪ್ರವೇಶಾವಕಾಶ ಕೊಡಲಾಗುವುದು. ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಆಯ್ಕೆ ಆಧಾರಿತ ಹಾಗೂ ಸಾಂಕೇತಿಕವಾಗಿರುತ್ತವೆ. ಇತ್ತೀಚೆಗೆ ೯ನೇ ಮತ್ತು ೧೧ನೇ ತರಗತಿಯ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುತ್ತಿದೆ. ೯ನೇ ಮತ್ತು ೧೧ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ, ಗಣಿತ, ವಿಜ್ಞಾನ ಹಾಗು ಸಮಾಜಜ್ಞಾನ ಆಧರಿತವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ಬಿಟ್ಟುಹೋದುದರಿಂದ ತೆರವಾದ ಸ್ಥಾನಗಳಿಗೆ ೯ನೇ ಮತ್ತು ೧೧ನೇ ತರಗತಿಯ ಪ್ರವೇಶ ಅವಕಾಶಗಳು ನೀಡಲಾಗುತ್ತದೆ.
ಅರ್ಹತೆ
- ವಿದ್ಯಾರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿಯು ೯-೧೩ನೇ ವಯೋಮಿತಿಯಲ್ಲಿರಬೇಕು.
- ೩, ೪ ಮತ್ತು ೫ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿಯಲ್ಲಿ ಪರಿಗಣಿಸಲ್ಪಡುತ್ತಾರೆ.
- ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಮೊದಲ ಭಾರಿಗೆ ಮಾತ್ರ ಪಾಲ್ಗೊಳ್ಳಬೇಕು.
ಮೀಸಲಾತಿ
ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುತ್ತದೆ. ಶೇ. ೮೦ರಷ್ಟು ಸ್ಥಾನಗಳನ್ನು ಜಿಲ್ಲೆಯ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿನ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. ೩ನೇ ೧ರಷ್ಟು ಸ್ಥಾನಗಳನ್ನ ಹೆಣ್ಣುಮಕ್ಕಳಿಗೆ ಮೀಸಲಿಡಲಾಗುತ್ತದೆ.
ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ೬ನೇ ತರಗತಿಯಿಂದ ೧೨ನೇ ತರಗತಿಯವರೆಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದು. ವಿದ್ಯಾರ್ಥಿಗಳ ಊಟ, ವಸತಿಗಳನ್ನ ಶಾಲೆ ನೋಡಿಕೊಳ್ಳುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಅವಶ್ಯಕವಾದ ಶಾಲಾ ಸಮವಸ್ತ್ರ, ಪಠ್ಯ-ಪುಸ್ತಕಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳಾದ ಸೋಪ್, ಪೇಷ್ಟ್ ಎಲ್ಲಾ ವಸ್ತುಗಳನ್ನು ಶಾಲೆಯೆ ಒದಗಿಸುತ್ತದೆ.
ಪ್ರಶ್ನೆ ಪತ್ರಿಕೆಯ ಸ್ವರೂಪ :
ಆಯ್ಕೆ ಪರೀಕ್ಷೆಗೆ 11.30 ರಿ0ದ 01.30 ರವರೆಗೆ ಒಟ್ಟು ಎರಡು ಗಂಟೆಗಳ ಅವಧಿಯ ಪರೀಕ್ಷೆಯಾಗಿರುತ್ತದೆ. ಮತ್ತು ಎಲ್ಲಾ ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳಾಗಿದ್ದು ಒಟ್ಟು 3 ವಿಭಾಗಗಳಿರುತ್ತವೆ. 80 ಪ್ರಶ್ನೆಗಳಿಗೆ, 100ಅಂಕಗಳಿರುತ್ತವೆ.
ಪರೀಕ್ಷೆಯ ನಮೂನೆ
1. ಮಾನಸಿಕ ಸಾಮರ್ಥ್ಯ ಪರೀಕ್ಷೆ - ಪ್ರಶ್ನೆ (40) - ಅಂಕಗಳು-50
2. ಅಂಕಗಣಿತ ಪರೀಕ್ಷೆ - ಪ್ರಶ್ನೆ (20) - ಅಂಕಗಳು-25
3. ಭಾಷಾ ಪರೀಕ್ಷೆ - ಪ್ರಶ್ನೆ (20) - ಅಂಕಗಳು-25
ಒಟ್ಟು - ಪ್ರಶ್ನೆ (80) - ಅಂಕಗಳು-100
ಸೂಚನೆ :
- ಪ್ರತಿ ಅಭ್ಯರ್ಥಿಗೂ ಮೂರು ವಿಭಾಗಗಳನ್ನೊಳಗೊಂಡ ಒಂದು ಪರೀಕ್ಷಾ ಪುಸ್ತಿಕೆಯನ್ನು ಕೊಡಲಾಗುವುದು.
- ಅಂಗವಿಕಲ ವಿದ್ಯಾರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಅವಧಿಯನ್ನು ಕೊಡಲಾಗುವುದು.
ವಿಭಾಗ -1 : ಮಾನಸಿಕ ಸಾಮರ್ಥ್ಯದ ಪರೀಕ್ಷೆ
ಭಾಗ-1 (ಗುಂಪಿಗೆ ಸೇರದುದನ್ನು ಗುರುತಿಸುವುದು)
ಭಾಗ -2 (ಚಿತ್ರವನ್ನು ಹೊಂದಿಸುವುದು)
ಭಾಗ-3 (ಮಾದರಿಯನ್ನು ಪೂರ್ಣಗೊಳಿಸುವುದು)
ಭಾಗ-4 (ಚಿತ್ರದ ಅನುಕ್ರಮಣಕೆಯನ್ನು ಪೂರ್ಣಗೊಳಿಸುವುದು)
ಭಾಗ-5 (ಹೋಲಿಕೆ)
ಭಾಗ- 6 (ರೇಖಾಗಣಿತಾತ್ಮಕ ಚಿತ್ರ ಪೂರ್ಣಗೊಳಿಸುವುದು (ತ್ರಿಭುಜ, ಚತುರ್ಭುಜ, ವೃತ್ತ)
ಭಾಗ -7 (ಕನ್ನಡಿ ಪ್ರತಿಬಿಂಬ)
ಭಾಗ -8 (ಗುರುತುಮಾಡಿ ಹಿಡಿಯುವ ಮಾದರಿ ಮಡಚುವುದು/ ಮಡಚಿದ್ದನ್ನು ಬಿಚ್ಚುವುದು)
ಭಾಗ -9 (ಸ್ಥಳ ದೃಶ್ಯಕರಣ)
ಭಾಗ -10 (ಹುದುಗಿರುವ ಚಿತ್ರ)
ವಿಭಾಗ - 2. ಅಂಕಗಣಿತ ಪರೀಕ್ಷೆ
ಮಕ್ಕಳಲ್ಲಿ ಅಂಕಗಣಿತದ ಜ್ಞಾನ ಮತ್ತು ಕೌಶಲ್ಯಗಳನ್ನು ಅಳೆಯುವುದೇ ಈ ಪರೀಕ್ಷೆಯ ಮುಖ್ಯ ಉದ್ದೇಶ. ಈ ಪರೀಕ್ಷೆಯ ಎಲ್ಲಾ 20 ಪ್ರಶ್ನೆಗಳು ಕೆಳಗೆ ಕೊಟ್ಟಿರುವ 15 ಪಠ್ಯವಸ್ತುಗಳನ್ನೇ ಆಧರಿಸಿರುತ್ತವೆ.
1) ಸಂಖ್ಯೆಗಳು ಮತ್ತು ಸಂಖ್ಯಾ ಪದ್ಧತಿ.
2) ಪೂರ್ಣಾಂಕಗಳ ಮೇಲಿನ ನಾಲ್ಕು ಗಣಿತದ ಮೂಲಭೂತ ಕ್ರಿಯೆಗಳು.
3) ಬಿನ್ನಾಂಕ ಮತ್ತು ಅವುಗಳ ಮೇಲಿನ ನಾಲ್ಕು ಗಣಿತದ ಮೂಲಭೂತ ಕ್ರಿಯೆಗಳು.
4) ಅಪವರ್ತನಗಳು ಮತ್ತು ಗುಣಕಗಳು - ಅವುಗಳ ಗುಣವಿಶೇಷಗಳು.
5) ಲಘುತ್ತಮ ಸಾಮಾನ್ಯ ಅಪವತ್ಯ (ಲ.ಸಾ.ಅ) ಮತ್ತು ಮಹತ್ತರ ಸಾಮಾನ್ಯ ಅಪವರ್ತನ (ಮ.ಸಾ.ಅ).
6) ದಶಮಾಂಶಗಳು ಮತ್ತು ಅವುಗಳ ಮೇಲಿನ ಗಣಿತದ ಮೂಲಭೂತ ಕ್ರಿಯೆಗಳು.
7) ಭಿನ್ನರಾಶಿಯನ್ನು ದಶಮಾಂಶವಾಗಿಯೂ ದಶಮಾಂಶವನ್ನು ಭಿನ್ನರಾಶಿಯಾಗಿಯೂ ಪರಿವರ್ತಿಸುವುದು.
8) ಅಳತೆಗಳಲ್ಲಿ ಸಂಖ್ಯೆಗಳ ಪ್ರಯೋಗ - ಉದ್ದ ದ್ರವ್ಯರಾಶಿ, ಸಾಮರ್ಥ್ಯ, ಕಾಲ, ಹಣ ಇತ್ಯಾದಿ.
9) ದೂರ, ಕಾಲ ಮತ್ತು ವೇಗ
10) ಅಂದಾಜು ಬೆಲೆ ಕಂಡು ಹಿಡಿಯುವುದು
11) ಸರಳೀಕರಣ
12) ಶೇಕಡಾ ಕ್ರಮ ಮತ್ತು ಅದರ ಅನ್ವಯಗಳು
13) ಲಾಭ ಮತ್ತು ನಷ್ಟ
14) ಸರಳಬಡ್ಡಿ
15) ಸುತ್ತಳತೆ, ವಿಸ್ತೀರ್ಣ ಮತ್ತು ಗಾತ್ರ.
ವಿಭಾಗ – 3. ಭಾಷಾ ಪರೀಕ್ಷೆ
ಈ ಪರೀಕ್ಷೆಯ ಮುಖ್ಯ ಉದ್ದೇಶ - ಅಭ್ಯರ್ಥಿಗಳ ಓದಿನ ಗ್ರಹಿಕೆಯನ್ನು ಮಾಪನ ಮಾಡುವುದು. ಈ ಪರೀಕ್ಷೆಯಲ್ಲಿ ಐದು ವಾಕ್ಯವೃಂದಗಳಿವೆ. ಪ್ರತಿ ವಾಕ್ಯ ವೃಂದದ ನಂತರ, ವಾಕ್ಯವೃಂದಕ್ಕೆ ಸಂಬಂಧಿಸಿದ 5 ಪ್ರಶ್ನೆಗಳಿವೆ. ಅಭ್ಯರ್ಥಿಗಳು ಪ್ರತಿಯೊಂದು ವಾಕ್ಯವೃಂದವನ್ನು ಗಮನವಿಟ್ಟು ಓದಿ, ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕು.
ಹಳೆಯ ಪ್ರಶ್ನೆಪತ್ರಿಕೆಗಳು
30.04.2022 ರಂದು ನೆಡೆದ ಕನ್ನಡ ಮಾಧ್ಯಮ ಪ್ರಶ್ನೆಪತ್ರಿಕೆ-
30.04.2022 ರಂದು ನೆಡೆದ ಕನ್ನಡ ಮಾಧ್ಯಮ ಪ್ರಶ್ನೆಪತ್ರಿಕೆ- ಉತ್ತರಗಳು-
Real resource Person
ಪ್ರತ್ಯುತ್ತರಅಳಿಸಿ