ಪ್ರಮುಖ ವಚನ ಹಾಗೂ ಪದ್ಯಗಳ ಮೌಲ್ಯಾಧಾರಿತ ಭಾವಾರ್ಥ (GPSTR)

 ಆತ್ಮೀಯರೇ, 

    6-8 ನೇ ತರಗತಿ GPSTR ನೇಮಕಾತಿ CET ಗೆ ಸಿದ್ಧತೆ ಮಾಡುತ್ತಿರುವ ಆಕಾಂಕ್ಷಿಗಳಗೆ ಅಗತ್ಯವಿರುವ ಕನ್ನಡ ಭಾಷಾ ಸಾಮರ್ಥ್ಯ ವಿವರಣಾತ್ಮಕ ಪರೀಕ್ಷೆ (ಪತ್ರಿಕೆ-3) ರಲ್ಲಿ ಬರುವ 'ಪ್ರಮುಖ ವಚನ ಹಾಗೂ ಪದ್ಯಗಳ ಮೌಲ್ಯಾಧಾರಿತ ಭಾವಾರ್ಥ' ಕುರಿತು  ಮಾಹಿತಿ ಇಲ್ಲಿ ದೊರೆಯಲಿದೆ. ಸ್ಪರ್ಧಾರ್ಥಿಗಳಿಗೆ ಉಪಯೋಗವಾದಲ್ಲಿ ನಮ್ಮ ಶ್ರಮ ಸಾರ್ಥಕ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿರಿ.

ಇಂತಿ  ತಮ್ಮ ಶ್ರೇಯೋಭಿಲಾಷಿ
ಶ್ರೀ ಇಸ್ಮಾಯಿಲ್ ಪಿ ತಳಕಲ್ 
ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ.ಮಾಡಗಿರಿ.

ಭಾವಾರ್ಥ: 
    ಈ ವಚನದಲ್ಲಿ ಸಿದ್ಧರಾಮಣ್ಣ ಭಕ್ತಿ ಚಳುವಳಿಯ ಒಂದು ಸಮಸ್ಯೆಯ ಬಗ್ಗೆ  ವಿಚಾರ  ಮಾಡುತ್ತಾರೆ.ಭವಿಯಾದವನು ಅಂದರೆ ಭಕ್ತಿ ಇಲ್ಲದವನನ್ನು ಭಕ್ತನನ್ನಾಗಿ ಮಾಡುವುದು ಸರಿಯೋ ತಪ್ಪೋ ಎಂದು ತಮ್ಮಲ್ಲೇ  ಪ್ರಶ್ನೆ ಕೇಳಿಕೊಂಡು ಅದಕ್ಕೆ ಸಮರ್ಥನೆ ನೀಡಲು ಪ್ರಯತ್ನಿಸುತ್ತಾರೆ.ಆಗಮದ ಪ್ರಕಾರ ಹೊರಗಿನವರನ್ನು ಭಕ್ತಿ ಚಳುವಳಿಗೆ ಸೇರಿಸಿಕೊಳ್ಳಬಹುದು ಮತ್ತು ಅವರಿಗೆ ನಮ್ಮ ಸಮಾನ  ಸ್ಥಾನ  ಕೊಡಬಹುದು.ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದರೆ ಆಗಮದ ಯಾವ ಭಾಗದಲ್ಲಿ ಈ ರೀತಿಯ ಘೋಷಣೆ ಇದೆ ಎಂದು ತಿಳಿದು ಬರುವುದಿಲ್ಲ.ಅದೇನೇ ಆದರೂ ಇಲ್ಲಿ ಭಕ್ತಿ ಚಳುವಳಿಗೆ ಸೇರಲು ಅವನ ಜಾತಿ ಕುಲ ಯಾವುದು ಲೆಕ್ಕಕ್ಕೆ ಬರುವುದಿಲ್ಲ.
    ಇಲ್ಲಿ ಸಿದ್ಧರಾಮಣ್ಣ ಇನ್ನೊಂದು ವಾದವನ್ನು ಮಂಡಿಸುತ್ತ ಇಲ್ಲಿ ಬಸವಣ್ಣನ ತತ್ವ ವಿಚಾರ ಮತ್ತು ಕಲ್ಯಾಣದ ಜನರು  ಆಚರಿಸುತ್ತಿದ್ದ  ತತ್ವಗಳೇ ಮೇಲು ನಮಗೆ ಎಂದು ಹೇಳುತ್ತಾ ಬಸವಣ್ಣನ ಸಿದ್ಧಾಂತಗಳನ್ನು ಸಿದ್ಧರಾಮ ಒಪ್ಪಿಕೊಳ್ಳುತ್ತಾನೆ.ಅಂದರೆ ಇದು ಕೂಡ ಜಾತಿ ನಿರ್ಮೂಲನೆಗೆ ಅವರು ತೊಟ್ಟ ಪಣಕ್ಕೆ ಸಾಕ್ಷಿಯಾಗಿರುವ ಇನ್ನೊಂದು ವಚನ.ಇಲ್ಲಿ ಯಾರೊಬ್ಬನ ಹಿನ್ನೆಲೆ ಏನೇ ಇರಬಹುದು,ಅಥವಾ ಅವನು ಯಾವ ಜಾತಿಯವನೇ ಆಗಿರಬಹುದು,ಎಲ್ಲರಿಗೂ ಭಕ್ತಿ ಚಳವಳಿಯಲ್ಲಿ ಸ್ಥಾನವಿದೆ,ಎಲ್ಲರೂ ಸಮಾನರೆ ಎಂದು ಹೇಳುತ್ತಾರೆ.

ಭಾವಾರ್ಥ:
    ಈ ವಚನದಲ್ಲಿ ಮೋಳಿಗೆಯ ಮಾರಯ್ಯ ತನ್ನ ಪತ್ನಿಯಾದ ಮಹಾದೇವಿಯಮ್ಮ ಹೇಗೆ ತನಗೆ ಆಧ್ಯಾತ್ಮದ ಹಾದಿಯಲ್ಲಿ ಊರುಗೋಲು ಆಗುತ್ತಾಳೆ ಎಂಬುದನ್ನು ಹೇಳುತ್ತಾನೆ.ತನ್ನ ಭಕ್ತಿಗೆ ಆಕೆಯೇ ಶಕ್ತಿ ಮತ್ತು ದೇವರನ್ನು ಕಂಡುಕೊಳ್ಳುವ ಸತ್ಯದಲ್ಲಿ ಆಕೆಯೇ ಸತಿ ಎಂದು ಹೇಳುತ್ತಾ ಗಂಡಿಗೆ ಹೆಣ್ಣಿನ ಅವಶ್ಯಕತೆ ಭಕ್ತಿ ಮಾರ್ಗದಲ್ಲಿ ಹೇಗೆ ಎಂದು ವಿವರಿಸುತ್ತಾನೆ . ಹಾಗೆ ಲೌಕಿಕ ಜೀವನದಲ್ಲಿ ಹೆಂಡತಿ ತನ್ನ ಸುಖ ದುಃಖ ಎರಡನ್ನೂ ಹಂಚಿಕೊಳ್ಳುವ ಸ್ವರೂಪಿಣಿ ಎನ್ನುತ್ತಾ ಶಿವನಲ್ಲಿ ಪ್ರಶ್ನಿಸುತ್ತಾ ನಮ್ಮಿಬ್ಬರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು . ಏಕೆಂದರೆ ಅವರು ದೇವರನ್ನು ಕಂಡುಕೊಳ್ಳುವ ರೀತಿ ಮತ್ತು ಬಾಳ್ವೆ ಮಾಡಿದ ರೀತಿ ಇಬ್ಬರೂ ಸಮನಾಗಿ ಅನುಭವಿಸಿದರು ಎಂದು. ಅಂದರೆ ಇಲ್ಲಿ ೧೨ನೆ ಶತಮಾನದಲ್ಲಿ ಶರಣರು ನೀಡಿದ  ಸ್ತ್ರೀ ಸಮಾನತೆಯನ್ನು ಕೂಡ ಕಾಣಬಹುದು .


ಭಾವಾರ್ಥ:
        ಇಲ್ಲಿ ಬಸವಣ್ಣನವರು ಮನುಷ್ಯನ ಮುಪ್ಪಿನ ಲಕ್ಷಣಗಳನ್ನು ಹೇಳುತ್ತಾ,ಮುಪ್ಪು ಬಂದು ಮೃತ್ಯುವನ್ನು ತಲುಪುವ ಮುಂಚೆ ಕೂಡಲಸಂಗಮದೇವನನ್ನು  ಪೂಜಿಸು ಎಂದು ಹೇಳುತ್ತಾರೆ.ಮುಖದ ಮೇಲೆ ಕೆನ್ನೆ ಮತ್ತು ಗಲ್ಲ ಸುಕ್ಕು ಗಟ್ಟಿದಂತಾಗಿ ಮುಖದ ಛಾಯೆ ಬಾಡುವ ಮುನ್ನ,ಹಲ್ಲುಗಳೆಲ್ಲ ಹೋಗಿ,ಬೆನ್ನು ಗೂನಾಗಿ ಬೇರೆಯವರನ್ನು ಅವಲಂಭಿಸುವ ಮುನ್ನ,ನಡೆಯಲು ಕೋಲು ಹಿಡಿಯುವಂತಾಗುವ ಮುನ್ನ ಲಿಂಗದೆವನನ್ನು ಪೂಜಿಸಬೇಕು ಎಂದು ಹೇಳುತ್ತಾರೆ. 
    ಇಲ್ಲಿ ಪೂಜೆ ಅಂದರೆ ಕೇವಲ ದೇವರನ್ನು ಪೂಜಿಸುವುದು ಮಾತ್ರವಲ್ಲ,ಅಲ್ಲದೆ ತನ್ನ ಕಾಯಕವನ್ನು ಕೂಡ ಸರಿಯಾದ ಸಮಯದಲ್ಲಿ ಮಾಡಬೇಕು ಎಂದು ಇದರ ಅರ್ಥ.'ಕಾಯಕವೇ ಕೈಲಾಸ' ಎಂದು ಸಾರಿ ಕಲ್ಯಾಣದಲ್ಲಿ 'ಕಾಯಕ ಕ್ರಾಂತಿ'ಯನ್ನೇ ಉಂಟು ಮಾಡಿದ ಬಸವಣ್ಣ,ಭಕ್ತಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕಾಯಕಕ್ಕೂ ಕೊಟ್ಟಿದ್ದರು.ಆದ್ದರಿಂದಲೇ ನಾನಾ ಕಾಯಕ ವರ್ಗದವರು ಭಕ್ತಿ ಪ್ರದಾನವಾದ ಮತ್ತು ಸಾಮಾಜಿಕ ಸಮಾನತೆ ಸಾರುತ್ತಿದ್ದ ಅನುಭವ ಮಂಟಪದಲ್ಲಿ ಭಾಗಿಯಾಗಿದ್ದು. 'ಹೊತ್ತು ಹೋಗುವ ಮುನ್ನ ಲಿಂಗವ ಪೂಜಿಸಬೇಕು' ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಇಲ್ಲಿ ಕೂಡ ಪೂಜೆ ಮತ್ತು ಕಾಯಕವನ್ನು ಹೊತ್ತು ಇರುವಾಗಲೇ ಮಾಡಬೇಕು ಎಂದು ಹೇಳುತ್ತಾರೆ.


ಭಾವಾರ್ಥ:
    ಈ ವಚನದಲ್ಲಿ ಬಸವಣ್ಣ ಶಿವ ಶರಣರಿಗೆ ಇರಬೇಕಾದ ಆತಿಥ್ಯದ ಗುಣ ಲಕ್ಷಣಗಳನ್ನು ವಿವರಿಸುತ್ತಾನೆ..ಮನೆಗೆ ಬಂದ ಅತಿಥಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಯೋಗ ಕ್ಷೇಮ ವಿಚಾರಿಸಿದರೆ ನಮ್ಮ ಸಿರಿತನ ಹಾರಿ ಹೋಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸುತ್ತಾರೆ...ಅದೇ ರೀತಿ ಅವರನ್ನು ಕುಳಿತು ಕೊಳ್ಳಲು ಆಹ್ವಾನ ನೀಡಿದರೆ,ನೆಲ ತಗ್ಗಿ ಹೋಗುತ್ತದೆಯೇ ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾ ಮನೆಗೆ ಬಂದವರನ್ನು ಪ್ರೀತಿಯಿಂದ ಮಾತನಾಡಿಸುವುದು ಸೌಜನ್ಯದ ಲಕ್ಷಣ; ಹಾಗೆ ಮಾಡದಿರುವುದು ಮತ್ತು ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡದಿರುವುದು ಸಜ್ಜನರ ಲಕ್ಷಣವಲ್ಲ ಎಂದು ಹೇಳುತ್ತಾನೆ.
    ಮೂಗ ಕೊಯ್ಯದೆ ಬಿಡುವನೆ ಎಂದರೆ ಅಂಥವರು ಶಿಕ್ಷಾರ್ಹರು ಎಂದು ಹೇಳುತ್ತಾ ಅಂಥವರು ದೇವರ ಒಲುಮೆಗೆ ಪಾತ್ರರಾಗುವುದಿಲ್ಲ ಎಂದು ಬಸವಣ್ಣ ಹೇಳುತ್ತಾರೆ. ಇವನಾರವ ಎಂದೆನಿಸದೆ,ಇವನಮ್ಮವ ಎಂದೆನಿಸಯ್ಯಾ ಎಂದು ತನ್ನ ಇನ್ನೊಂದು ವಚನದಲ್ಲಿ ಎಲ್ಲ ವರ್ಗದ ಜನರನ್ನು ಆದರದಿಂದ ಕಾಣು  ಎಂದು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕರೆ ನೀಡಿರುವಂತೆ ಇಲ್ಲಿ ಕೂಡ ಆದರಾತಿಥ್ಯ ಶರಣರ ಗುಣ ಲಕ್ಷಣ ಎಂದು ಸಂಭೋಧಿಸುತ್ತಾನೆ.


ಭಾವಾರ್ಥ:
    ಪ್ರಾಪಂಚಿಕ ವಿಷಯಾಭಿಲಾಷೆಯನ್ನು ಹೊಂದಿ,ತೋರುವ ಭಕ್ತಿಯನ್ನು ಇಲ್ಲಿ ವಿಡ೦ಭಿಸಿದ್ದಾರೆ.ಸರ್ವ ಸಂಪತ್ತಿಗೆ ಒಡೆಯನಾದ ರಾಜನ ಭಕ್ತಿ ಗರ್ವದಲ್ಲಿ ಹಾಳಾಯಿತು.ಬ್ರಾಹ್ಮಣನ ಭಕ್ತಿ ಮಾಡಿ ಮೈಲಿಗೆಗಳ ಅವಾಂತರದಲ್ಲಿ ನಷ್ಟವಾಯಿತು.ಶೀಲವಂತನ ಭಕ್ತಿ ಲೌಕಿಕ ಸುಖದಲ್ಲೇ ಲೀನವಾದ ಸಂಸಾರದಲ್ಲಿ ಸೇರಿ ಹೋಯಿತು.ಶೆಟ್ಟಿಯ ಭಕ್ತಿಯು ಲೋಭ ಬುದ್ದಿಯಂದ ಕೂಡಿದ ವಂಚಕತನದ ವ್ಯಾಪಾರದಲ್ಲಿ ಕೂಡಿ ಹೋಗಿತ್ತು.ನೀವು ಕೇಳಿರೋ ಇಂಥವರ ಡಾಂಭಿಕ ಭಕ್ತಿಗೆ ಗಣೆಯ ಮೇಲೆ ನಿಂತು ದೊಂಬರಾಟ ಆಡುವ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ.ದೈವ ಭಕ್ತಿಗೆ ಅಹಂಕಾರ ಸಲ್ಲದ ವಿಚಾರ,ಮಾಡಿ ಮೈಲಿಗೆಗಳ ಭಾವ,ಭಕ್ತನಿಗೆ ಸಲ್ಲದ್ದು,ದೇವನಿಗೂ ಒಲ್ಲದ ವಿಚಾರ ಅದು ಎಂಬ ಅರ್ಥವನ್ನು  ಈ ವಚನದಲಿ ಕಾಣಬಹುದು.


ಭಾವಾರ್ಥ:
    ಈ ವಚನದಲ್ಲಿ ಚೌಡಯ್ಯ ತನ್ನ ವೃತ್ತಿಯಾದ ದೋಣಿ ಹಾಯಿಸುವ ಅಂಬಿಗನನ್ನು ದೇವರಂತೆ ಚಿತ್ರಿಸಿ, ಆ ಕಾರ್ಯದಲ್ಲಿ ಅತಿಂದ್ರೀಯ ಅನುಭವವನ್ನು ಕಾಣುವ ಪ್ರಯತ್ನ ಮಾಡುತ್ತಾನೆ.. ಸಾಮಾನ್ಯ ಅಂಬಿಗನಿಗೆ ದಾಟಿಸಲು ಸಾಧ್ಯವಾಗದ, ಆಗಾಧವಾದ ಮತ್ತು ಕೊನೆಯಿಲ್ಲದ ನದಿಯನ್ನು ಒಡಲಿಲ್ಲದ ಅಂದರೆ ಅಶರೀರ ಅಂಬಿಗ ಮಾತ್ರ ದಾಟಿಸಲು ಸಾಧ್ಯ. 'ಮನದ ಬೆಲೆಕೊಟ್ಟರೆ' ಅಂದರೆ ನೀನು ಮನಃಪೂರ್ವಕವಾಗಿ ಭಕ್ತಿಯನ್ನು ಸಾಮರ್ಪಿಸಿಸಿದರೆ ಮಾತ್ರ ಒಂದು ನಿಶ್ಚಿತತೆಯನ್ನು ಕಂಡುಕೊಳ್ಳಬಹುದು, ಅಥವಾ ಹೊಳೆಯನ್ನು ದಾಟಬಹುದು ಎಂದು ವಿವರಿಸುತ್ತಾನೆ.
    ಇಲ್ಲಿ ಜೀವನವನ್ನು ಹೊಳೆ ಎಂದು ಬಣ್ಣಿಸಿ ಕಂಡುಕೊಳ್ಳಬೇಕಾದ ನಿತ್ಯತೆಯನ್ನು ಹೊಳೆ ಹಾಯುವುದಕ್ಕೆ ಹೋಲಿಸಿದ್ದಾನೆ ವಚನಕಾರ ಚೌಡಯ್ಯ.. ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ, ಚೌಡಯ್ಯ ಯಾವುದೇ ಮುದ್ರಿಕೆಯನ್ನು ಇಲ್ಲಿ ದೇವರೆಂದು ಚಿತ್ರಿಸಿಲ್ಲ, ಬದಲಾಗಿ ತನ್ನ ಮನೋವೃತ್ತಿಯನ್ನು , ಒಂದು ಅನುಭಾವವನ್ನು ದೈವಸ್ವರೂಪವಾಗಿ ಕಂಡುಕೊಂಡಿದ್ದಾನೆ.


ಭಾವಾರ್ಥ:
    ಈ ವಚನದಲ್ಲಿ ದೃಢತೆ ಇಲ್ಲದ ಮನಸ್ಸಿನ ಕಳವಳ ಮತ್ತು ಅಂತ ಒಂದು ಮನಸ್ಸಿನ ತೊಳಲಾಟ ಇಲ್ಲಿ ವ್ಯಕ್ತವಾಗಿದೆ. ಒಬ್ಬ ರೈತ ತಾನು ಬೆಳೆದ ಭತ್ತವನ್ನು ಮಾರುಕಟ್ಟೆಗೆ ಸಾಗಿಸುವಾಗ ತೆತ್ತಬೇಕಾದ  ಅನಿವಾರ್ಯವಾದ ಸುಂಕವನ್ನು ತಪ್ಪಿಸಲು ರಾತ್ರಿಯಿಡೀ ನಡೆದು ಹೋಗುತ್ತಾನೆ.ಸುಂಕ ತಪ್ಪಿಸಿಕೊಳ್ಳಲು ಹೋಗಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನೇ ಕಳೆದು ಕೊಳ್ಳುತ್ತಾನೆ.ಇದು ಒಂದು ರೀತಿಯ ಮೂರ್ಖತನವಾದರೆ, ಇನ್ನೊಂದು ರೀತಿಯಲ್ಲಿ ಅಂತಃಕರಣ ಶುದ್ಧವಿಲ್ಲದವನ ಮನಸ್ಸು ಮತ್ತು ಭಕ್ತಿ.
    ಇಲ್ಲಿ ಹರಿದ ಗೋಣಿ ಅಂದರೆ ತನ್ನನ್ನು ತಾನು ಅರಿಯದೆ ಅಜ್ಞಾನದಲ್ಲಿ,ಕತ್ತಲೆಯಲ್ಲಿ ಜೀವನ ಸಾಗಿಸುತ್ತಿರುವ ಒಂದು ಮನಸ್ಸು ಮತ್ತು ಸುಂಕಕ್ಕೆ ಅಂಜಿ ರಾತ್ರಿಯೆಲ್ಲ ನಡೆಯುವುದು ಅಂದರೆ ತನ್ನನ್ನು ತಾನು ಅರಿಯಲು ಪ್ರಯತ್ನಿಸದೆ ಇರುವುದು ಎಂದು ಭಾವಿಸಬಹುದು.ಬರಿಯ ಗೋಣಿ ಉಳಿಯಿತ್ತು ಅಂದರೆ ಕೇವಲ ದೇಹ ಉಳಿದಿತ್ತು ಎಂದು ಅರ್ಥೈಸಬಹುದು.. ಅಳಿಮನದವನ ಭಕ್ತಿ ಅಂದರೆ ಯಾವುದೇ ಒಂದು ಕಡೆ ದಿಟ್ಟ ಗುರಿ ಇಲ್ಲದ ಚಂಚಲ ಮನಸ್ಸಿನವನು,ಅವನಲ್ಲಿ ಭಕ್ತಿಯೂ ಕೂಡ ಹಾಗೆ ದೃಢತೆ ಇರುವುದಿಲ್ಲ ಎಂದು ಜೇಡರ(ದೇವರ) ದಾಸಿಮಯ್ಯನವರು ಹೇಳುತ್ತಾರೆ.



ಭಾವಾರ್ಥ:
        ಈ ವಚನದಲ್ಲಿ ಅಕ್ಕಮಹಾದೇವಿಯು ಮನುಷ್ಯ ತನ್ನ ಅಸಹಾಯಕತೆ ಮತ್ತು ತನ್ನ ಸಂಕಟದಲ್ಲಿ ಬೇರೆಯವರನ್ನು ಹೇಗೆ ದೂಷಿಸುತ್ತಾನೆ ಎಂದು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಗೂಬೆಗೆ ಹಗಲಿನಲ್ಲಿ ಕಣ್ಣು ಕಾಣದ್ದರಿಂದ ಸೂರ್ಯನನ್ನು ಬೈಯ್ಯುತ್ತದೆ ,ಅದೇ ರೀತಿ ಕಾಗೆಯು ರಾತ್ರಿ ಸಮಯದಲ್ಲಿ ಚಂದ್ರನನ್ನು ಬೈಯ್ಯುತ್ತದೆ ಮತ್ತು ಕುರುಡ ತನ್ನ ಪ್ರತಿಬಿಂಬ ಕನ್ನಡಿಯಲ್ಲಿ ಕಾಣದ್ದಕ್ಕೆ ಕನ್ನಡಿಯನ್ನೇ ಬೈಯ್ಯುತ್ತಾನೆ.ಇದು ಪ್ರತಿಯೊಬ್ಬ ಅಸಹಾಯಕನ ಸಹಜ ಮಾತು ಎಂದು ಹೇಳುತ್ತಾ ಇದು ಸಂಸಾರದಲ್ಲಿ ನರಕವು ಹೊರಳಾಡುವಂತೆ ದೂಷಿಸುವುದು ಕೂಡ ಎಂದು ಹೇಳುತ್ತಾರೆ.

    ಇಲ್ಲಿ ಶಿವನಿಲ್ಲ ಅಂದರೆ ತನಗಿರುವ ಶಕ್ತಿಯ ಬಗ್ಗೆ ನಂಬಿಕೆ ಮತ್ತು ಆತ್ಮ ವಿಶ್ವಾಸ ಇಲ್ಲದೆ ಬೇರೆಯದರ ಬಗ್ಗೆ ಅಪೇಕ್ಷಿಸುವ ಪರಿ ಮತ್ತು ಮುಕ್ತಿಯಿಲ್ಲ ಅಂದರೆ ಇಂಥ ಕಷ್ಟಗಳು ತನಗೆ ಮಾತ್ರ ಇರುವುದು ಎಂದು ಭಾವಿಸಿ ಸದಾ ಇನ್ನೊಬ್ಬರನ್ನು ದೂರುತ್ತಿರುವುದು. ತನಗಿರುವ ಅಗಾಧ ಶಕ್ತಿಯನ್ನು ಉಪಯೋಗಿಸಿಕೊಳ್ಳದೆ ಅನ್ಯರನ್ನು ದೂಷಿಸಿದರೆ ಅಂಥವರನ್ನು ಚನ್ನಮಲ್ಲಿಕಾರ್ಜುನ ನರಕಕ್ಕೆ ತಳ್ಳುತ್ತಾನೆ ಅಂದರೆ ಅವರು ಯಾವಾಗಲು ಕಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾ ತಮಗೆ ಲಭ್ಯವಿರುವ ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಂಡು ಒಳ್ಳೆ ರೀತಿಯಲ್ಲಿ ನಡೆದರೆ ಶಿವನನ್ನು ತಲುಪಬಹುದು ಅಂದರೆ ಮುಕ್ತಿಯ ಕಡೆ ನಡೆಯಬಹುದು ಎಂದು ಹೇಳುತ್ತಾರೆ.


ಭಾವಾರ್ಥ:
    ಈ ವಚನದಲ್ಲಿ ಅಲ್ಲಮಪ್ರಭು ಅವರು ಮನುಷ್ಯ ಹೇಗೆ ಕಷ್ಟವನ್ನು ಎದುರಿಸಲಾಗದೆ ಮಾಡಿ ಮತ್ತೆ ಕೊನೆಗೆ ಇನ್ನೊಂದು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡು ಬಳಲುತ್ತಾನೆ ಎಂಬುದನ್ನು ಕೆಲವು ನಿದರ್ಶನಗಳ ಮೂಲಕ ವಿವರಿಸುತ್ತಾರೆ.
    ಕಳ್ಳನಿಗೆ ಹೆದರಿಕೊಂಡು ಕಾಡಿನ ಒಳಗೆ ಅಡಗಿದರೆ ಹುಲಿಯ ಬಾಯಿಗೆ ಆಹಾರವಾಗುತ್ತಾನೆ..  ಆ ಹುಲಿಗೆ ಹೆದರಿ ಹುತ್ತದಲ್ಲಿ ಅಡಗಿದರೆ,ಅಲ್ಲಿ ಹಾವಿನ  ಕೈಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.. ತನಗೆ ಬಂದ  ಕಷ್ಟವನ್ನು ಎದುರಿಸಬಹುದಾಗಿದ್ದರೂ ತನ್ನ ಪಲಾಯನವಾದದಿಂದ ಮತ್ತೊಂದು ದೊಡ್ಡ ಕಷ್ಟದಲ್ಲಿ ಸಿಲುಕಿ ನಲುಗುತ್ತಾನೆ.

  ಕೊನೆಗೆ ಸಾವಿಗೆ ಅಂಜಿ ದೇವರ ನೆನೆಯುತ್ತಾ ಭಕ್ತನಾದರೆ ತನ್ನ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ ,ಬದಲಾಗಿ ತನ್ನ ಕರ್ಮಗಳೇ ಅವನನ್ನು ಕೊಲ್ಲುತ್ತದೆ. ಇಲ್ಲಿ ಭಕ್ತನಾದವನನ್ನು ವೇಷಡಂಬಕ ಎಂದು ಕರೆಯುತ್ತಾ, ಅಂಥವರ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾರೆ.


ಭಾವಾರ್ಥ:
        ಇಲ್ಲಿ ಬಸವಣ್ಣನವರು ಬಲ ಮತ್ತು ದುರ್ಬಲ ಎಂದು ಭಾವಿಸಿರುವ ಕೆಲವು ವಸ್ತುಗಳ ಬಗ್ಗೆ ನಮಗೆ ಇರುವ ತಪ್ಪು ತಿಳುವಳಿಕೆಯನ್ನು ಕೆಲವು ನಿದರ್ಶನಗಳ ಮೂಲಕ ಹೇಳುತ್ತಾರೆ.ಮೊದಲನೆಯದು ದಿನ ನಿತ್ಯದ ಘಟನೆ,ಮತ್ತೊಂದು ಪೌರಾಣಿಕ ಹಿನ್ನೆಲೆ ಇಂದ ಮತ್ತು ಇನ್ನೊಂದು ಭೌತಿಕ ತತ್ವ ಉಳ್ಳ ನಿದರ್ಶನ.
        ಆನೆ ಗಾತ್ರದಲ್ಲಿ ದೊಡ್ಡದು ಮತ್ತು ಬಲಶಾಲಿ ಕೂಡ,ಆದರೆ ಅಂತ ಆನೆಯನ್ನು ಅದರ ಮಾವುತ ಒಂದು ಅಂಕುಶ ದಿಂದ(ಸಣ್ಣ ಸಲಾಕೆ)ಅದನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಅದೇ ರೀತಿ ಒಂದು ಪರ್ವತ ಕೂಡ ಬಹಳ ದೊಡ್ಡದಾಗಿ ಕಾಣುತ್ತದೆ,ಪುರಾಣದ ಪ್ರಕಾರ ಇಂದ್ರ ತನ್ನ ವಜ್ರಾಯುಧದಿಂದ ಪರ್ವತವನ್ನು ನಾಶ ಮಾಡುತ್ತಾನೆ.ಇನ್ನು ಕತ್ತಲು  ಬಹಳ ಘೋರವಾಗಿ ಕಂಡರೂ ಒಂದು ಸಣ್ಣ  ಬೆಳಕಿನ ಕಿಡಿ ಅದನ್ನು ಮುಚ್ಚಬಲ್ಲದು.ಆದ್ದರಿಂದ ವಸ್ತುವಿನ ಗಾತ್ರದ ಮೂಲಕ ಅದರ ದುರ್ಬಲತೆಯನ್ನು ಅಳೆಯಬಾರದು ಎಂದು ಹೇಳುತ್ತಾ ಮನುಷ್ಯನ ಸಹಜ ಗುಣವಾದ ಮರೆಯುವಿಕೆ ಘನವಲ್ಲ,ಬದಲಾಗಿ ದೇವರನ್ನು ಕಂಡುಕೊಳ್ಳಲು ಶಿವನ ಸ್ವರೂಪವಾದ ಕೂಡಲಸಂಗಮದೇವನನ್ನು ನೆನೆಯುವುದು ಮತ್ತು ಧ್ಯಾನಿಸುವುದೇ  ಘನ ಎಂದು ಹೇಳುತ್ತಾರೆ.

ಭಾವಾರ್ಥ:
    ಬಸವಣ್ಣನವರು ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ, ಹೃದಯ ವೈಶಾಲ್ಯತೆಯು ಗೈರು ಹಾಜರಾದಾಗ ನಿಮ್ಮ ಭಕ್ತಿಗೆ ಅರ್ಥವಿರುವುದಿಲ್ಲ. ಎಂಬುದನ್ನು ಹೀಗೆ ವಿವರಿಸುತ್ತಾರೆ. ಮನುಷ್ಯರ ನಡುವೆ ಮನಸ್ಸುಗಳು ಬೆರೆತಾಗ ತನು ಕರಗುವಂತಹ ಅಂತಃಕರಣವಿರಬೇಕು. ಪರಸ್ಪರ ಸ್ಪರ್ಶಗಳಲ್ಲಿ ಪುಳಕುಗಳಿರಬೇಕು.
ಒಬ್ಬರೊಬ್ಬರನ್ನು ಕಂಡಾಗ ಕಣ್ಣೀರು ಸುರಿಯುವಂತಕ ಭಾವುಕತೆಗಳಿರಬೇಕು. ಮಾತನಾಡುವಾಗ ಗಂಟಲು ತೇವಗೊಂಡಿರಬೇಕು. ಇಂತಹ ಆತ್ಮೀಯತೆಯನ್ನು ಹೊಂದಿರುವುದೇ ಭಕ್ತಿಯ ಗುರುತು, ಅಂತಃಕರಣ ಭಾವುಕತೆ,
ಆತ್ಮೀಯತೆ, ಪುಳಕಗಳಂತಹ ಭಾವಗಳನ್ನು ಹೊಂದಿರದೆ ಕೃತಕವಾಗಿ ನಡೆದುಕೊಳ್ಳುವವನು ಡಾಂಭಿಕನೇ (ಮೋಸಗಾರ) ಹೊರತು ಉತ್ತಮ ಭಕ್ತನಾಗಿರಲಾರ ಎಂದು ಹೇಳುವ ಮೂಲಕ ಮಾನವೀಯ ಗುಣಗಳೇ ಭಕ್ತಿಯ ಮೂಲ.

ಭಾವಾರ್ಥ:
    ಸತ್ವವಿರದ ತೋರಿಕೆಯ ಭಕ್ತಿಯು ಮಂಗನ ಕೈಯಲ್ಲಿರುವ ಮಾಣಿಕ್ಯದಂತೆ ಅದರ ಬೆಲೆಯನ್ನು ಮಂಗ ಅರಿಯಲಾರದು. ಹಾಗೆ ತೋರಿಕೆಯ ಭಕ್ತಿ ನಿಜವಾದ ಭಕ್ತಿಯ ಬೆಲೆಯನ್ನು ಅರಿಯಲಾರದು ಎಂಬುದನ್ನು ಬಸವಣ್ಣನವರು ಕೆಲವು ಉದಾಹರಣೆಗಳ ಮೂಲಕ ಸಾಬೀತು ಮಾಡುತ್ತಾರೆ. ಕೈಯಲ್ಲಿ ಅರ್ಧರೇಖೆಯಿದ್ದು ಸಾಕಷ್ಟು ಸಂಪತ್ತು ಹೊಂದಿದ್ದರು ಸಹ ಅದನ್ನು ಅನುಭವಿಸಲು ಆಯಸ್ಸೇ ಇಲ್ಲದಿದ್ದರೆ ಅದು ವ್ಯರ್ಥವಲ್ಲವೆ?  ಹೋರಾಡಲಾರದ ಹೇಡಿಯ ಕೈಯಲ್ಲಿ ಚಂದ್ರಾಯುಧವೇ ಇದ್ದರು ಉಪಯೋಗಕ್ಕೆ ಬಾರದು.

    ಕುರುಡನ ಕೈಯಲ್ಲಿ ಕನ್ನಡಿ ಇದ್ದರೆ ಏನು ಪ್ರಯೋಜನ ಅದನ್ನು ಬಳಸಲಾರ, ಕೋತಿಯ ಕೈಯಲ್ಲಿ ಮಾಣಿಕ್ಯವೇ ಇದ್ದರು ಅದರ ಬೆಲೆಯನ್ನರಿಯದ ಕೋತಿಗೆ ಅದರಿಂದ ಉಪಯೋಗವಿಲ್ಲ ಹಾಗೆ ಕೂಡಲಸಂಗಮನ  ಶರಣರನರಿಯದವರ ಕೈಯಲ್ಲಿ ಲಿಂಗವಿದ್ದರು ಫಲವಿಲ್ಲ ಅಂದರೆ ಶರಣರ ಶ್ರೇಷ್ಠತೆಯನ್ನು
ಬೆಲೆಯನ್ನು ಅರ್ಥಮಾಡಿಕೊಳ್ಳಲಾರದವನ ಕೈಯಲ್ಲಿ ಲಿಂಗವೇ ಇದ್ದರು. ಅದು ವ್ಯರ್ಥವೇ ಸರಿ ಅಂತಹದ್ದು ಶಿವಪಥವನ್ನು ಅರಿಯಲಾರದ ಭಕ್ತಿ ಎಂದು ಹೇಳುವ ಮೂಲಕ ಬಸವಣ್ಣನವರು ಶರಣರ ಶ್ರೇಷ್ಠತೆಯನ್ನು ಹೇಳುತ್ತಾರೆ.

                                                                ಭಾವಾರ್ಥ:
    ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು.


ಭಾವಾರ್ಥ:
      ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.


ವಚನದ ಭಾವಾರ್ಥ / ಸಾರಾಂಶ

    ಆಹಾ ಎಂಥಹಾ ಮಧುರು ಭಕ್ತಿ ಅಕ್ಕಮಹಾದೇವಿ ತಾಯಿಯದ್ದು, ಸಾವಿಲ್ಲದ, ಕೇಡಿಲ್ಲದ, ಭವವಿಲ್ಲದ, ಭಯವಿಲ್ಲದ,ನಿರ್ಭಯ ಚೆಲುವ ಚೆನ್ನಮಲ್ಲಿಕಾರ್ಜುನನ ಬೆರೆತು ಬೇರಿಲ್ಲದಂತಿಪ್ಪಳಾಗಿ ಅಂಗಗುಣವಳಿದ ಲಿಂಗಗುಣ ಸಂಪನ್ನೆ, ಶರಣೆ ಸತಿಯಾಗಿ ಲಿಂಗಪತಿ ಭಾವ ತುಂಬಿರಲು, ಅಂಗೇಂದ್ರಿಯಗಳು ಅಡಗಿ ಲಿಂಗೇಂದ್ರಿಯಗಳಾದವಾಗಿ. ಕಣ್ಣು ನೋಡುವ ನೋಟ ಲಿಂಗದ ನೋಟ, ಕಿವಿ ಕೇಳುವ ವಾರ್ತೆ ಲಿಂಗವಾರ್ತೆ, ಮೂಗಿಗೆ ಸೂಸುವ ಪರಿಮಳ ಲಿಂಗ ಪರಿಮಳ, ಎನ್ನ ನಾಲಗೆ ನುಡಿವ, ಪ್ರತಿ ನುಡಿಯೂ ಲಿಂಗವಾಣಿ, ಎನ್ನ ನಾಲಗೆಗೆ ತಾಕುವ ರುಚಿ ಸತ್ವವ ಸೂರೆಮೂಡಿ ತನ್ನೊಗಳಗಿನ ಲಿಂಗಕ್ಕೆ ಅರ್ಪಿಸುತ್ತಾಳೆ ಮಹಾದೇವಿಯಕ್ಕ,
ಸಹಸ್ರ ಸಹಸ್ರ ಸುಗಂಧ ಪುಷ್ಪಗಳು ಸೂಸುವ ಸುವಾಸನೆಯೂ, ಎನ್ನ ನಾಸಿಕದಿಂದ ನಿಮಗರ್ಪಿತ, ಭಕ್ತಿಪರಿಮಳ.
ನನ್ನಲ್ಲಿ ಸುಖ-ದುಃಖವೆಂಬ ಭಿನ್ನವಿಲ್ಲದೇ ಅದು ಕೂಡ ಪ್ರಸಾದವೆಂದು  ಸ್ವಿಕರಿಸುವೆ, ಆದ ಕಾರಣ ನನಗೊದಗಿದ ಸುಖವು ಕೂಡ  ನಿಮಗರ್ಪಿತ. 
    ಚೆನ್ನಮಲ್ಲಿಕಾರ್ಜುನ ಎನಗೆ ಸರ್ವಸ್ವವೂ ನೀವಾದಿರಾಗಿ, ಬಂದ ಪರಿಸ್ಥಿತಿಯನ್ನು ಛಲದಿಂದ ಎದುರಿಸಿ ಸಾಧಿಸುವೆ, ಏನೇ ಬಂದರೂ ಅದು ನಿಮ್ಮ ಆಜ್ಞೆ, ಎಂದು ನಿಮಗರ್ಪಿಸಿ, ಸಮಾಧಾನದಿಂದ ಸ್ವೀಕರಿಸುವೆ, ನಿಮ್ಮದೆಂದು ಅರಿಯದ ಮುನ್ನ ಮುಟ್ಟಲಾರೆ, ನಿಮ್ಮದೆಂದು ಅರಿತು ಮುಟ್ಟಿದ ಮೇಲೆ ಅದು  ಲಿಂಗಮಯ ಪ್ರಸಾದವ ನಿಮಗರ್ಪಿಸಿ, ಸಂದೇಹಿಸದೆ ಸ್ವೀಕರಿಸುವೆ ಎನ್ನುತ್ತಾರೆ .


ವಚನಗಳ ಭಾವಾರ್ಥ / ಸಾರಾಂಶ

ಭಾವಾರ್ಥ / ಸಾರಾಂಶ :ಈ ಮೇಲಿನ ವಚನದಲ್ಲಿ ಅಲ್ಲಮಪ್ರಭುವು ದೇಹವನ್ನು ಬಂಡಿಗೆ ಹೋಲಿಸಿದ್ದಾರೆ . ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು ಹಾಗಾಗಿ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳು ಇದಂತೆ ಎಂದಿದ್ದಾರೆ. ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ.ಅಲ್ಲಮಪ್ರಭುಗಳು ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ. ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು. ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ , ಎಚ್ಚರದಿಂದ ನೋಡಿಕೊಳ್ಳಬೇಕು .

    ಅಲ್ಲಮಪ್ರಭು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ. ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು ಎಂದು ತಿಳಿಸಿದ್ದಾರೆ. ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು, ನೋಟ , ಸ್ಪರ್ಶ , ಶ್ರವಣ , ರುಚಿ , ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ . ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ . ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು . ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು . ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ , ಅವುಗಳೇ ದೇಹವೆಂಬ ಬಂಡಿಗೆ ಆಧಾರ. ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು . ಹಾಗಾದಲ್ಲಿ ಆ ಬಂಡಿಯ ಅಚ್ಚು , ಎಂದರೆ ಆತ್ಮನಾಶವಾಗುತ್ತದೆ . ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ .



      

ವಚನಗಳ ಭಾವಾರ್ಥ / ಸಾರಾಂಶ


  ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...