ಕನ್ನಡ ವರ್ಣಮಾಲೆ ಮತ್ತು ವರ್ಣೋತ್ಪತ್ತಿ ಸ್ಥಾನ

 ಕನ್ನಡ ವರ್ಣಮಾಲೆ ಮತ್ತು ವರ್ಣೋತ್ಪತ್ತಿ ಸ್ಥಾನ

Download PDF to clik here  


ಕನ್ನಡ ವರ್ಣಮಾಲೆ
ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ.
“ನಾನು ಪಾಠಶಾಲೆಗೆ ಹೋಗಿ ಬಂದೆನು.” ಈ ವಾಕ್ಯದಲ್ಲಿ ‘ನಾನು’, ‘ಪಾಠಶಾಲೆಗೆ’, ‘ಹೋಗಿ’, ‘ಬಂದೆನು’ - ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಅನೇಕ ಅಕ್ಷರಗಳಿವೆ. ‘ನಾನು’ ಎಂಬಲ್ಲಿ ನ್ +ಆ+ ನ್ +ಉ ಎಂಬ ಬೇರೆ ಬೇರೆ ಅಕ್ಷರಗಳಿವೆ. ನಾವು ಕನ್ನಡ ಭಾಷೆಯನ್ನು ಮಾತಾಡುವಾಗ ಇಂಥ ೪೯ ಅಕ್ಷರಗಳನ್ನು ಬಳಸುತ್ತೇವೆ. ಕನ್ನಡದ ಈ ೪೯ ಅಕ್ಷರಗಳ ಮಾಲೆಗೇ ‘ವರ್ಣಮಾಲೆ’ ಅಥವಾ ‘ಅಕ್ಷರಮಾಲೆ’ ಎನ್ನುತ್ತೇವೆ.



ಸ್ವರಗಳು
"ಸ್ವತಂತ್ರವಾದ, ಸ್ಪಷ್ಟವಾದ ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು ‘ಸ್ವರಗಳು’ ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೧೩ ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು
ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ.
ಉದಾ : ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ (೧೩)
ಸಂಧ್ಯಕ್ಷರಗಳು – ಐ , ಔ
ಸ್ವರಗಳನ್ನು ‘ಹ್ರಸ್ವಸ್ವರ' ‘ಧೀರ್ಘಸ್ವರ' ಮತ್ತು ಪ್ಲುತಸ್ವರ ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

* ಹ್ರಸ್ವಸ್ವರಗಳು:- ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.
ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು ೬)

ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುªರ ÀÄ.
ಅವುಗಳೆಂದರೆ - ಆ ಈ ಊ ಏ ಐ ಓ ಔ (ಒಟ್ಟು ೭)

ಇನ್ನು ದೀರ್ಘಸ್ವವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪ್ಲುತ ಸ್ವರ ಎಂದು ಹೆಸರು. ಇವು ಮೂರು ಅಥವಾ ಹೆಚ್ಚು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುತ್ತವೆ.
ಉದಾಹರಣೆ : ಅಣ್ಣಾs ss, ತಮ್ಮಾ ss, ಗೆಳೆಯಾ ss,

ವ್ಯಂಜನಗಳು :
ಸ್ವರಗಳ ಸಹಾಯದಿಂದ ಮಾತ್ರ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಾಕ್ಷರಗಳು ಎನ್ನುವರು. ಕನ್ನಡದಲ್ಲಿ ಒಟ್ಟು ೩೪ ವ್ಯಂಜನಾಕ್ಷರಗಳಿವೆ.
‘ಕ’ ವರ್ಗ - ಕ್. ಖ್, ಗ್, ಘ್, ಙ್,
‘ಚ’ ವರ್ಗ - ಚ್, ಛ್, ಜ, ಝ್, ಞ್,
‘ಟ’ ವರ್ಗ - ಟ್, ಠ್, ಡ್, ಡ್ , ಣ್
‘ತ’ ವರ್ಗ - ತ್, ಥ್, ದ್, ಧ್, ನ್
‘ಪ’ ವರ್ಗ - ಪ್, ಫ್, ಬ್, ಭ್, ಮ್
ಯ್, ರ್, ಲ್, ವ್, ಶ್, ಷ್, ಸ, ಹ್, ಳ್


ವ್ಯಂಜನಗಳಲ್ಲಿ ಒಟ್ಟು ಎರಡು ವಿಧಗಳಿವೆ
೧) ವರ್ಗೀಯ ವ್ಯಂಜನ 
೨) ಅವರ್ಗೀಯ ವ್ಯಂಜನ

೧) ವರ್ಗೀಯ ವ್ಯಂಜನಗಳು (೨೫) ‘ವರ್ಗ’ ಎಂದರೆ ಗುಂಪು ಎಂದು ಅರ್ಥ ಈ ವ್ಯಂಜನಾಕ್ಷರಗಳನ್ನು ಕ,ಚ,ಟ,ತ,ಪ ಎಂದು ಉಚ್ಚಾರಣೆಯ ಆಧಾರದ ಮೇಲೆ ಐದು (೫) ಗುಂಪುಗಳನ್ನಾಗಿ ಮಾಡಿರುವುದರಿಂದ ವರ್ಗೀಯ ವ್ಯಂಜನಗಳು ಎಂದು ಕರೆಯುವರು.

(ವರ್ಗೀಯ ವ್ಯಂಜನಗಳು ‘ಕ’ ದಿಂದ ‘ಮ’ ವರೆಗೆ ಒಟ್ಟು – ೨೫ ) 

ವರ್ಗೀಯ ವ್ಯಂಜನಗಳಲ್ಲಿ ೩ ವಿಧಗಳಿವೆ:
ಅ) ಅಲ್ಪಪ್ರಾಣ 
ಬ) ಮಹಾಪ್ರಾಣ ಮತ್ತು 
ಕ) ಅನುನಾಸಿಕ

ಅ) ಅಲ್ಪಪ್ರಾಣ (೧೦) :ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಅಲ್ಪಪ್ರಾಣಾಕ್ಷರಗಳು
ಎನ್ನುವರು. 
ಒಟ್ಟು ೧೦ ಅಲ್ಪಪ್ರಾಣಾಕ್ಷರಗಳಿವೆ.

ಕ್,ಚ,ಟ್,ತ್,ಪ್, 
ಗ್,ಜ್,ಡ್,ದ್,ಬ್

ಬ) ಮಹಾಪ್ರಾಣ(೧೦):ಹೆಚ್ಚುಉಸಿರಿನಿಂದ ಚ್ಚರಿಸುವ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಾಕ್ಷರಗಳು
ಎನ್ನುವರು. 
ಒಟ್ಟು ೧೦ ಮಹಾಪ್ರಾಣಾಕ್ಷರ ಗಳಿವೆ.

ಖ್, ಛ್,ಠ್,ಥ್,ಫ್ 
ಘ್, ಝ್, ಡ್ , ಧ್,ಭ್

ಕ) ಅನುನಾಸಿಕ (೦೫) : ‘ನಾಸಿಕ’ ಎಂದರೆ ಮೂಗು, ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ
ಅಕ್ಷರಗಳಿಗೆ ಅನುನಾಸಿಕ ಅಕ್ಷರಗಳು ಎನ್ನುವರು. 

ಒಟ್ಟು ೫ ಅನುನಾಸಿಕ ಅಕ್ಷರಗಳಿವೆ.

ಙ್, ಞ್, ಣ್, ನ್, ಮ್

೨) ಅವರ್ಗಿಯ ವ್ಯಂಜನಗಳು (೦೯) :
‘ಯ’ ಯಿಂದ ‘ಳ’ ವರೆಗಿನ ೯ ಅಕ್ಷರಗಳಿಗೆ ವರ್ಗದ ವ್ಯವಸ್ಥೆ ಇಲ್ಲದುದರಿಂದ ಇವುಗಳನ್ನು
ಅವರ್ಗೀಯ ವ್ಯಂಜನಗಳು ಎನ್ನುವರು.

ಯ್ ರ್ ಲ್ ವ್ ಶ್ ಷ್ ಸ್ ಹ್ ಳ್

೩) ಯೋಗವಾಹಗಳು(೦೨):‘ಯೋಗ’ ಎಂದರೆ ಸಂಬಂಧವನ್ನು ‘ವಾಹ’ ಎಂದರೆ ಹೊಂದುವುದು ಬೇರೊಂದು ಪದದ/ಅಕ್ಷರದ ಜೊತೆಗೆ ಸಂಬಂಧ ಹೊಂದಿದಾಗ ಮಾತ್ರ ಇವನ್ನು ಉಚ್ಚರಿಸಲು ಬರುತ್ತದೆ.

ಅನುಸ್ವಾರ (ಂ) ವಿಸರ್ಗ (ಃ)

ವರ್ಣೋತ್ಪತ್ತಿ ಸ್ಥಾನ
ಕನ್ನಡ ವರ್ಣಮಾಲೆಯ ಅಕ್ಷರಗಳು ಬಾಯಿಯಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿ ಉಚ್ಚರಿಸಲ್ಪಡುತ್ತವೆ. ಆದ್ದರಿಂದ ಆಯಾ ಸ್ಥಾನಗಳ ಹೆಸರುಗಳನ್ನೇ ಈ ಅಕ್ಷರಗಳು ಹೊಂದಿವೆ. ಅಂತಹ ಉತ್ಪತ್ತಿಯ ಸ್ಥಾನಗಳು ಈ ಕೆಳಗಿನಂತಿವೆ.

೧. ಕಂಠ್ಯಾಕ್ಷರಗಳು : ಕ, ಖ, ಗ, ಘ, ಙ, ಅ, ಆ, ಹ, ಃ ಇವು ಕಂಠದಲ್ಲಿ ಹುಟ್ಟುವುದರಿಂದ ಈ ಅಕ್ಷರಗಳಿಗೆ ಕಂಠ್ಯಾಕ್ಷರಗಳು ಎಂದು ಹೆಸರು.

೨. ತಾಲವ್ಯಾಕ್ಷರಗಳು : ಚ, ಛ, ಜ, ಝ, ಞ, ಇ, ಈ, ಯ, ಶ ಇವು ಬಾಯಿಯ ತಾಲುಭಾಗ (ಅಂಗಳಿನ ಮುಂಭಾಗ)ದಲ್ಲಿ ಹುಟ್ಟುವುದರಿಂದ ಈ ಅಕ್ಷರಗಳಿಗೆ ತಾಲವ್ಯಾಕ್ಷರಗಳು ಎಂದು ಹೆಸರು.

೩. ಮೂರ್ಧನ್ಯಾಕ್ಷರಗಳು : ಟ, ಠ, ಡ, ಢ, ನ, ಋ, ರ, ಷ ಇವು ನಾಲಗೆಯ ಮೇಲ್ಭಾಗವಾದ ಮೂರ್ಧ
(ಅಂಗಳ) ದಲ್ಲಿ ಹುಟ್ಟುವುದರಿಂದ ಈ ಅಕ್ಷರಗಳಿಗೆ ಮೂರ್ಧನ್ಯಾಕ್ಷರಗಳೆಂದು ಹೆಸರು.

೪. ದಂತ್ಯಕ್ಷರಗಳು : ತ, ಥ, ದ, ಧ, ನ, ಲ, ಸ ಇವು ದಂತ (ಹಲ್ಲು)ಗಳ ಸಹಾಯದಿಂದ ಹುಟ್ಟುವುದರಿಂದ ಈ ಅಕ್ಷರಗಳಿಗೆ ದಂತ್ಯಕ್ಷರಗಳು ಎಂದು ಹೆಸರು.

೫. ಓಷ್ಠ್ಯಕ್ಷರಗಳು : ಪ, ಫ, ಬ, ಭ, ಮ, ಉ, ಊ, ಂ ಇವುಗಳು ‘ಓಷ್ಠ್ಯ’(ತುಟಿ)ಗಳ ಸಹಾಯದಿಂದ
ಹುಟ್ಟುವುದರಿಂದ ಈ ಅಕ್ಷರಗಳಿಗೆ ಓಷ್ಠ್ಯಗಳು ಎಂದು ಹೆಸರು.

೬. ಕಂಠ್ಯ-ತಾಲವ್ಯಗಳು : ಎ, ಏ, ಐ ಇವುಗಳು ಕಂಠ್ಯ ಮತ್ತು ತಾಲು ಎರಡೂ ಭಾಗದ ಸಹಾಯದಿಂದ
ಹುಟ್ಟುವುದರಿಂದ ಈ ಅಕ್ಷರಗಳಿಗೆ ಕಂಠ-ತಾಲುಗಳು ಎಂದು ಹೆಸರು.

೭. ಕಂಠೌಷ್ಠ್ಯ : ಒ, ಓ, ಔ ಇವುಗಳು ಕಂಠ್ಯ ಮತ್ತು ಓಷ್ಠ್ಯ ಭಾಗಗಳಲ್ಲಿ ಹುಟ್ಟುವುದರಿಂದ ಈ ಅಕ್ಷರಗಳಿಗೆ
ಕಂಠೌಷ್ಠ್ಯಗಳು ಎಂದು ಹೆಸರು.

೮. ದಂತೌಷ್ಠ್ಯ : ‘ವ’ ಎಂಬ ಅಕ್ಷರವು ದಂತ ಮತ್ತು ಓಷ್ಠ್ಯಗಳ ಸಹಾಯದಿಂದ ಹುಟ್ಟುವುದರಿಂದ ಈ
ಅಕ್ಷರಕ್ಕೆ ದಂತೌಷ್ಠ್ಯ ಎಂದು ಹೆಸರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...