ಕನ್ನಡ ನಾನಾರ್ಥ ಪದಗಳು

 ಕನ್ನಡ ನಾನಾರ್ಥ ಪದಗಳು

    ಒಂದು ಪದ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುವಂತಿದ್ದರೆ ಅದನ್ನು ನಾನಾರ್ಥಕ ಅಥವಾ ಭಿನ್ನಾರ್ಥಕ ಪದವೆಂದು ಕರೆಯುವರು. ಕೆಲವು ಪದಗಳು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆಯಾಗುವುದುಂಟು.  "ಇಂತಹ ಪದಗಳನ್ನು 'ಶ್ಲೇಷೆ' ಎಂದೂ ಕರೆಯುತ್ತಾರೆ. 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಾನಾರ್ಥ ಪದಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿರುತ್ತವೆ.

ಉದಾಹರಣೆಗೆ: ಕಾಡು ಎಂಬ ಪದವು ಅರಣ್ಯ ಎಂದೂ ಪೀಡಿಸು ಎಂದೂ ಅರ್ಥ ನೀಡುತ್ತದೆ.
                  ಬಟ್ಟೆ ಎಂಬ ಪದವು ವಸ್ತ್ರ ಮತ್ತು ದಾರಿ  ಎಂಬ ಬೇರೆ ಬೇರೆ ಅರ್ಥ ನೀಡುತ್ತದೆ.

ಈ ಕೆಳಗೆ ವಿವಿಧ ಮೂಲಗಳಿಂದ ಕೆಲವು ನಾನಾರ್ಥಕ ಪದಗಳನ್ನು ಸಂಗ್ರಹಿಸಿ ನೀಡಲಾಗಿದೆ.

ಅಂಕ - ಗುರುತು, ತೊಡೆ, ನಾಟಕದ ವಿಭಾಗ, ಕಲೆ, ಯುದ್ಧ, ಬಿರುದು.

ಅಂಕಕಾರ - ಮುಂದಾಳು, ಯುದ್ಧವೀರ.

ಅಂಕನ - ಗುರುತು, ಎಣಿಸುವಿಕೆ.

ಅಂಕಿತ - ರುಜು, ವಶ.

ಅಂಕೆ - ವಶ, ಸಂಖ್ಯೆಯ ಗುರುತು.

ಅಂಗ - ಶರೀರದ ಭಾಗ, ರೀತಿ, ಕ್ರಮ.

ಅಂಗವಣೆ - ಶಕ್ತಿ, ಅಭಿಪ್ರಾಯ.

ಅಂಚಲ (ಅಂಚು) - ಸೆರಗು, ಗಡಿ.

ಅಂಚೆ  - ಟಪಾಲು, ಪಕ್ಷಿ.

ಅಂಜನ - ಕಾಡಿಗೆ, ರಾತ್ರಿ.

ಅಂಡೆ - ಪಾತ್ರೆ, ಆಶ್ರಯ.

ಅಂತ - ಕೊನೆ, ಒಳಗೆ.

ಅಂಶಕ - ಭಾಗ, ದಾಯಾದಿ.

ಅಕ್ಷ - ಗಾಲಿಯ ಅಚ್ಚು, ಪಗಡೆ, ರುದ್ರಾಕ್ಷ, ಜ್ಞಾನ, ಕಣ್ಣು.

ಅಕ್ಷರ - ನಾಶವಾಗದ, ನಿತ್ಯ, ವರ್ಣ, ಬ್ರಹ್ಮ, ಆತ್ಮ.

ಅಗ - ಪರ್ವತ, ಚಲಿಸದ, ಮರ, ಹಾವು.

ಅಗಿ - ಅಗೆ, ತಿನ್ನು, ನಡುಗು, ಆನಂದಿಸು.

ಅಲೆ = ತೆರೆ, ತಿರುಗಾಡು

ಆಳು = ಆಡಳಿತ ಮಾಡು, ಸೇವಕ

ಉಡಿ = ಮಡಿಲು, ಪುಡಿ

ಊರು = ಗ್ರಾಮ, ದೃಢ, ತೊಡೆ

ಎರಗು = ನಮಿಸು, ಮೇಲೆಬೀಳು

ಒರಗು = ಮಲಗು, ಸಾಯಿ

ಕಣ್ಣು= (ನಾನಾರ್ಥ ಪದವಲ್ಲ)

ಕರ = ಕೈ ತೆರಿಗೆ

ಕರ್ಣ = ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ

ಕರೆ = ಕಲೆಯಾಗು, ಕೂಗು

ಕಲ್ಯಾಣ = ಕ್ಷೇಮ, ಮದುವೆ, ಮಂಗಳ

ಕಾಡು = ಪೀಡಿಸು, ಅರಣ್ಯ

ಕಾರು = ಮಳೆ, ಕತ್ತಲೆ, ಹೊರಹಾಕು

ಕಾಲ = ಸಮಯ, ಯಮ

ಕಾಲು = ಶರೀರದ ಭಾಗ, ನಾಲ್ಕನೇ ಒಂದು ಭಾಗ

ಕುಡಿ = ಚಿಗುರು, ಸೇವಿಸು

ಕೂಡಿ = ಕುಳಿತುಕೊಳ್ಳಿ, ಸೇರಿಸು

ಗತಿ = ಚಲನೆ, ಸ್ಥಿತಿ, ಮೋಕ್ಷ

ಗುಡಿ = ಮನೆ, ದೇವಾಲಯ, ಬಾವುಟ

ಗುರು = ಉಪದ್ಯಾಯ, ಹಿರಿಯ, ದೊಡ್ಡ, ಒಂದು ಗೃಹ

ಗುಂಡಿ = ಹಳ್ಳ, ಬಟನ್‌

ಗಂಡ = ಪತಿ, ಪೌರುಷ, ಅಪಾಯ

ಚೀಟಿ = ಕಾಗದದ ಚೂರು, ಯಂತ್ರ

ಜವ = ವೇಗ , ಯಮ

ತಾಳಿ = ಮಾಂಗಲ್ಯ, ತಡೆದುಕೊಳ್ಳಿ, ಸಹಿಸು

ತಿರಿ = ತಿರುಗು, ಭಿಕ್ಷೆ

ತುಂಬಿ = ಪೂರ್ಣಗೊಳಿಸು, ದುಂಬಿ

ತೊಡೆ = ನಿವಾರಿಸು, ಕಾಲಿನ ಭಾಗ

ದಳ= ಸೈನ್ಯ, ಎಸಳು

ದೊರೆ = ರಾಜ , ಸಿಕ್ಕು

ನಗ = ಆಭರಣ, ನಾಣ್ಯ

ನಡು = ಮಧ್ಯ, ಸೊಂಟ

ನರ = ರಕ್ತನಾಳ, ಅರ್ಜುನ, ಮನುಷ್ಯ

ನೆರೆ = ಸೇರು, ಮುತ್ತು, ಪ್ರವಾಹ, ಪಕ್ಕ

ನೋಡು = ಅವಲೋಕಿಸು

ರಾಗ = ಸ್ವರ, ಪ್ರೀತಿ

ಅಗ್ನಿ= ಶಿಖೆ, ಬೆಂಕಿ,

ಅಂಬರ = ಆಕಾಶ, ಬಟ್ಟೆ

ಬೇಡ = ನಿರಾಕರಿಸು, ವ್ಯಾಧ

ಮತ = ಜಾತಿ, ಅಭಿಪ್ರಾಯ, ಬೆಂಬಲ

ಮಾಗಿ = ಒಂದು ಕಾಲ, ಪಕ್ವವಾಗು

ಮುತ್ತು = ಚುಂಬನ, ಆವರಿಸು

ಮೃಗ = ಪ್ರಾಣಿ, ಜಿಂಕೆ

ಮೋರಿ = ವಾಲಗ, ಚರಂಡಿ

ಮಂಡಲ = ರಂಗೋಲಿ, ವೃತ್ತ, ನಿರ್ದಿಷ್ಟ ಪ್ರದೇಶ

ಶಿವ = ಒಡೆಯ, ಶಂಕರ

ಶೇಷ = ಉಳಿಕೆ, ಹಾವು

ಶಿಖಿ = ಬೆಂಕಿ, ತುದಿ, ನವಿಲು

ಸತ್ತೆ = ಕಸ, ಸಾಯು, ಅಧಿಕಾರ

ವಜ್ರ = ಹರಳು, ಕಠಿಣ

ಸುಕ್ಕು = ನೆರಿಗೆ, ಮುದುಡು

ಬೇಡ = ಬೇಟೆಗಾರ

ಮಂದಿ = ಜನ

ಸರ್ಪ = ಹಾವು, ಉರಗ

ಹಡೆ = ಹೆರಿಗೆಯಾಗು , ಜನ್ಮನೀಡು

ಹುತ್ತ = ಹಾವಿನ ವಾಸಸ್ಥಾನ, ಗೆದ್ದಲು ಕಟ್ಟಿದ ಮಣ್ಣಿನ ಗೂಡು

ಕೈಲಾಸ = ಶಿವನ ವಾಸಸ್ಥಳ,

ಧಾರೆ = ಒಂದೇ ಸಮನೆ ನೀರು ಸುರಿಸುವಿಕೆ

ದರ್ಬಾರು = ಅಧಿಕಾರ ನಡೆಸುವಿಕೆ

ಭಿಕ್ಷೆ = ತಿರುಪೆ; ಬೇಡುವುದು

ವರ = ಮದುವೆಯಾಗುವ ಗಂಡು

ಸೀದಾ = ನೇರವಾಗಿ

ಹಳಹಳಿಸು = ಉಮ್ಮಳಿಸು; ದುಃಖಿತನಾಗು

ಗಾನ = ಹಾಡು, ಸಂಗೀತ

ನಾಲೆ = ಕಾಲುವೆ, ತೋಡು

ಮೋಡ = ಎತ್ತರದ ಸ್ಥಾನ, ಮುಗಿಲು

ಸುತ್ತು = ವೃತ್ತ ತಿರುಗು, ಅಲೆದಾಟ

ಸುಳಿ = ಸುತ್ತಾಡು, ಚಕ್ರ, ಬಾಳೆಗಿಡದ ತುದಿ

ಸೋಮ = ಪಾನೀಯ, ಚಂದ್ರ, ದಿನದ ಹೆಸರು

ಸೇರು = ಒಂದಾಗು, ಅಳತೆಯ ಮಾಪನ

ಹತ್ತು = ಏರು, ದಶ

ಹರಿ = ಕೃಷ್ಣ, ಪ್ರವಹಿಸು

ಹೊತ್ತು = ಸಮಯ, ಹೊರುವುದು

ಹೊರೆ = ಸಲಹು, ಭಾರ

ಹಿಂಡು = ಮುದ್ದೆಮಾಡು, ಗುಂಪು

ಅಡವಿ = ಕಾಡು, ಅರಣ್ಯ

ದಣಿವು = ಆಯಾಸ

ದಾನ = ಕೊಡುಗೆ




1 ಕಾಮೆಂಟ್‌:

ಆಸರೆ ತಂತ್ರಜ್ಞಾನ ಪ್ರಮುಖ ವೀಡಿಯೋಗಳು.

 ಆತ್ಮೀಯ ಶಿಕ್ಷಕ ಮಿತ್ರರೇ, ಶಿಕ್ಷಕರ e-ಕಲಿಕೆಗೆ ಸಂಬಂಧಿಸಿದ ಪ್ರಮುಖ ವಿಡಿಯೋ ಲಿಂಕ್ಸ್. 1. Google Docs https://youtu.be/zg9cBOvObaI?si=kLF4AydJrg26VJYA 2...